== ಸುಮತಿ ಮೊರಾರ್ಜಿ == ಭಾರತದ ಮೊದಲ ಮಹಿಳಾ ನೌಕಾನೆಲೆಯ ಮೊದಲ ಪ್ರಮುಖ ವ್ಯಕ್ತಿತ್ವವಾಗಿ ಇವರು ಸೇವೆಸಲ್ಲಿಸಿದ್ದಾರೆ. ಜಗತ್ತಿನ ಮೊದಲ ನೌಕಾ ನಿರ್ಮಾಪಕಿಯಾಗಿ ರೂಪುಗೊಂಡಿದ್ದಾರೆ. ಇವರಿಗೆ ಪದ್ಮವಿಭೂಶಣ ಪ್ರಶಸ್ತಿ ಸಂದಿದೆ. ೧೯೭೧ ರಲ್ಲಿ ನಾಗರಿಕ ಸೇವೆಯಲ್ಲಿ ಅತೀ ಹೆಚ್ಚು ನಾಗರಿಕತೆಯ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಇವರಾಗಿದ್ದಾರೆ. == ಜನನ == ಇವರು ಮುಂಬೈನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮಧುರದಾಸ ಗೊಕುಲದಾಸ್, ತಾಯಿ ಪ್ರೆಮಬಾಯಿಯವರ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಜಮುನ. ಇವರಿಗೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ವಿವಾಹವಾಯಿತು. ಇವರ ಪತಿ ಶಾಂತಿಕುಮರ್ ನರೊತ್ತಮ ಮೊರಾರ್ಜಿ. ಈ ದಂಪತಿಗಳ ಮಗ ನರೊತ್ತಮ ಮೊರಾರ್ಜಿ. == ಸ್ಕಿಂಡಿಯಾ ಸ್ಟೀಮ ನ್ಯಾವಿಗೆ‍‍‍‍‌‌‌‌‌‌‌‌‍‍ಷನ್ ಕಂಪನಿ == ಈ ಕಂಪನಿಯನ್ನು ೧೯೨೩ ರಲ್ಲಿ ಸ್ಥಾಪಿಸಿದರು ಆವಾಗ ಸುಮತಿ ಮೊರರ್ಜಿ ಅವರಿಗೆ ಕೇವಲ ೨೦ವರ್ಷ ವಯಸ್ಸಾಗಿತ್ತು. ಈ ಕಂಪನಿಯನ್ನು ಮೊದಲು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭಿವ್ರದ್ಧಿಹೊಂದತೊಡಗಿತು. ೧೯೪೬ರಲ್ಲಿ ೬೦೦೦ ಜನರು ಕೆಲಸಮಾಡುವ ತಮ್ಮದೆ ಕಂಪನಿಯ ಮುಖ್ಯ ಕಾರ್ಯನಿರ್ದೆಶಕಿಯಾಗಿ ಕೆಲಸ ಮಾಡತೊಡಗಿದರು ಹಾಗೂ ನೌಕಾ ವ್ಯಾಪಾರದಲ್ಲಿ ತಿಳುವಳಿಕೆ ಉಳ್ಳ ಮಹಿಳ ಉದ್ಯಮಿಯಾಗಿ ರೂಪುಗೊಂಡರು. == ಸಾಧನೆ == ಇವರು ಸುಮತಿ ವಿದ್ಯಾ ಕೇಂದ್ರ ಶಾಲೆಯನ್ನು ಮುಂಬೈನಲ್ಲಿ ಸ್ಥಾಪಿಸಿದರು. ಐ.ಎಸ್.ಕೆ.ಸಿ.ಓ.ಎನ್ ನ ಸ್ಥಾಪಕರಗಿದ್ದಾರೆ. ೧೯೭೦ರ ವಿಶ್ವ ನೌಕಾ ಉಪ ಅದ್ಯಕ್ಷರಾಗಿ ಲಂಡನಲ್ಲಿ ಆಯ್ಕೆಗೊಂಡಿದ್ದಾರೆ. ನರೊತ್ತಮ್ ಮೊರಾರ್ಜಿ ಅವರ ಕಂಪನಿಯಲ್ಲಿ ಅಧ್ಯಕ್ಷರಾಗಿದ್ದರು. == ಉಲ್ಲೇಖಗಳು ==